Gudibande : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುಡಿಬಂಡೆ ತಾಲ್ಲೂಕು ಕಚೇರಿ ಮುಂಭಾಗ DYFI ಸಂಘಟನೆ ಸದಸ್ಯರು ಸೋಮವಾರ ಪ್ರತಿಭಟಿಸಿದರು (Protest).
ಜಿಲ್ಲೆಯಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವುದು, ಖಾಸಗಿ ವಲಯದ ನೇಮಕಾತಿಯಲ್ಲಿ ಮೀಸಲಾತಿ ಹೆಚ್ಚಳ, ಯುವನಿಧಿ ಹೆಚ್ಚಳ, ನಿರುದ್ಯೋಗಿಗಳಿಗೆ ಉದ್ಯೋಗ ಅಥವಾ ಭತ್ಯೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರರ ಮೂಲಕ ಮನವಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ದೇವರಾಜು, ಡಿವೈಎಫ್ಐ ಸಹ ಕಾರ್ಯದರ್ಶಿ ವೆಂಕಟರಮಣ, ಸದಸ್ಯ ಸೋಮಶೇಖರ್ ರೆಡ್ಡಿ, ಗಂಗರಾಜು, ಹರಿಕೃಷ್ಣ, ರಾಮಾಂಜಿ, ವೆಂಕಟೇಶ್, ಗಂಗಾಧರ, ಅಶೋಕ್, ತಿರುಮಲೇಶ್, ನರೇಂದ್ರ, ಶಿವಕುಮಾರ್, ಕೆಪಿಆರ್‌ಎಸ್‌ನ ಆದಿನಾರಾಯಣಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.