Gudibande : ಗುಡಿಬಂಡೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S N Subbareddy) ನೇತೃತ್ವದಲ್ಲಿ ಬುಧವಾರ ಪಟ್ಟಣ ಪಂಚಾಯಿತಿ (Town Panchayat) ಸಾಮಾನ್ಯ ಸಭೆ (General Meeting) ನಡೆಸಲಾಯಿತು. ನೀರು ಸರಬರಾಜು ವಿಭಾಗಕ್ಕೆ ಬೇಕಾಗಿರುವ ಸಾಮಗ್ರಿ ಖರೀದಿಸಲು ಹರಾಜು, ಜೆಸಿಬಿ, ಟ್ರ್ಯಾಕ್ಟರ್ ಚಾಲಕರ ನೇಮಕಾತಿ, ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಂತಾನ ಶಕ್ತಿ ಶಸ್ತ್ರಚಿಕಿತ್ಸೆಗೆ ಟೆಂಡರ್ ಕರೆಯುವುದು ಸೇರಿದಂತೆ ಸಭೆಯಲ್ಲಿ ಹಲವು ವಿಷಯಗಳ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ “ಮಳೆಯಿಂದ ಯಾವುದೇ ಸಮಸ್ಯೆಯಾಗದಂತೆ ಪಟ್ಟಣ ಪಂಚಾಯಿತಿ ಕೆಲಸ ಮಾಡಬೇಕು. ಮುಖ್ಯರಸ್ತೆ ಅಗಲೀಕರಣಕ್ಕೆ ಕಟ್ಟಡ ಕಳೆದು ಕೊಂಡ 58 ಫಲಾನುಭವಿಗಳಿಗೆ ನವಂಬರ್ 15ರೊಳಗೆ ನಿವೇಶನ ಹಕ್ಕುಪತ್ರ ವಿತರಿಸಲಾಗುವುದು. ಪಲ್ಲೇಯಗಾರಹಳ್ಳಿ ಬಳಿ ನಿವೇಶನ ರಹಿತರಿಗೆ ಐದು ಎಕರೆ ಜಮೀನು ಮಂಜೂರು ಅಗಿದ್ದು, ಸಮತಟ್ಟು ಮಾಡಬೇಕು. ನಗರೋತ್ಥನದಲ್ಲಿ ₹4 ಕೋಟಿ ಬಿಡುಗಡೆಯಾಗಿದ್ದು, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಬೇಕು” ಎಂದು ಹೇಳಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಕಾಸ, ಉಪಾಧ್ಯಕ್ಷ ಗಂಗರಾಜು, , ತಹಶೀಲ್ದಾರ್ ಸಿಗ್ಬತುಲ್ಲಾ, ಮುಖ್ಯಾಧಿಕಾರಿ ಶ್ರೀನಿವಾಸ್, ಸದಸ್ಯರಾದ ರಾಜೇಶ, ಬಷೀರಾ, ವೀಣಾ, ನಗೀನ್ ತಾಜ್, ರಾಜೇಶ, ಬಷೀರ್ ಅಹಮದ್, ಮಂಜುಳಾ, ಅನುಷಾ, ಇಸಮಾಯಿಲ್ ಅಜಾದ್, ಬಾಲಪ್ಪ, ಚಕ್ರಪಾಣಿ ಉಪಸ್ಥಿತರಿದ್ದರು.