Friday, March 24, 2023
HomeGudibande2 ಚಿನ್ನದ ಪದಕ ಗಳಿಸಿದ ಗುಡಿಬಂಡೆಯ ಕೃಷಿ ವಿದ್ಯಾರ್ಥಿನಿ

2 ಚಿನ್ನದ ಪದಕ ಗಳಿಸಿದ ಗುಡಿಬಂಡೆಯ ಕೃಷಿ ವಿದ್ಯಾರ್ಥಿನಿ

- Advertisement -
- Advertisement -
- Advertisement -
- Advertisement -

Gudibande : ಮಂಗಳವಾರ ಬೆಂಗಳೂರು GKVK ಯ ಡಾ. ಬಾಬು ರಾಜೇಂದ್ರಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ 55 ನೇ ಘಟಿಕೋತ್ಸವದಲ್ಲಿ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದ ರೈತ ದಂಪತಿ ಅಶ್ವತ್ಥಪ್ಪ ಮತ್ತು ಲಕ್ಷ್ಮೀ ರವರ ಪುತ್ರಿ ಜಿ ಎ ನಂದಿನಿ ಅವರು 2019-20ನೇ ಸಾಲಿನ UAS ಗೋಲ್ಡ್ ಮೆಡಲ್ ಫಾರ್ ಜನರಲ್ ಮೆರಿಟ್ ಮತ್ತು ಡಾ. ಎಲ್ ಸುದರ್ಶನ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಸ್ಯ ಜೀವರಸಾಯನಶಾಸ್ತ್ರದ ಕೃಷಿ ವಿಜ್ಞಾನ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ನಂದಿನಿ ಅವರು 10 ಅಂಕಗಳಿಗೆ 9.04 ಅಂಕ ಪಡೆಯುವ ಮೂಲಕ 2 ಚಿನ್ನದ ಪದಕ ಪಡೆದಿದ್ದಾರೆ.

ಜಿ ಎ ನಂದಿನಿ ಅವರು SSLC ವರೆಗೆ ಗುಡಿಬಂಡೆಯ ಅರವಿಂದ ಪ್ರೌಢ ಶಾಲೆ, PUC ಬಾಗೇಪಲ್ಲಿ ನ್ಯಾಷನಲ್ ಕಾಲೇಜು, BSc ಪದವಿಯನ್ನು ಹಾಸನ ಕೃಷಿ ವಿದ್ಯಾಲಯ, ಮತ್ತು MSc ಪದವಿಯನ್ನು ಬೆಂಗಳೂರಿನ ಜಿಕೆವಿಕೆಯಲ್ಲಿ ಪ್ರಥಮ ಶ್ರೇಯಾಂಕದಲ್ಲಿ ಪೂರ್ಣಗೊಳಿಸಿ, ಪ್ರಸ್ತುತ ದೆಹಲಿಯ ಹೆಸರಾಂತ ಐ ಆರ್ ಐ ಕಾಲೇಜಿನಲ್ಲಿ PhD ಮಾಡುತ್ತಿದ್ದಾರೆ.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!