Home News Chikkaballapur ಅಂಗನವಾಡಿ ನೌಕರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂಗನವಾಡಿ ನೌಕರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

0
Chikkaballapur anganwadi workers international womens day

Chikkaballapur : ಅಂಗನವಾಡಿ ನೌಕರ ಸಂಘದಿಂದ (Anganwadi Workers) ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day) ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಮುಟ್ಟಿನ ರಜೆ, ಹೆರಿಗೆ ರಜೆ, ಹೆರಿಗೆ ಸೌಲಭ್ಯಗಳನ್ನು ನೀಡಬೇಕು ಎಂದು ಹಲವು ಹಕ್ಕೊತ್ತಾಯಗಳು ಇಡಲಾಯಿತು. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ನ್ಯಾಯಮೂರ್ತಿ ವರ್ಮಾ ಅವರ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಒತ್ತಾಯಿಸಿ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇ.33 ಮೀಸಲು ಜಾರಿಗೊಳಿಸಲು ಆಗ್ರಹಿಸಲಾಯಿತು. ವಿವಿಧ ಬೇಡಿಕೆಗಳನ್ನು ಕುರಿತು ಸುದೀರ್ಘ ಚರ್ಚೆ ನಡೆಯಿತು.

ಕಾರ್ಯಕ್ರಮವನ್ನು ಅಂಗನವಾಡಿ ನೌಕರರ ಸಂಘ ಮೇಲ್ವಿಚಾರಕಿ ಡಿ.ಎಂ. ರತ್ನಮ್ಮ ಉದ್ಘಾಟಿಸಿದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಕೆನರಾ ಬ್ಯಾಂಕ್‌ನ ತರಬೇತಿ ಸಂಯೋಜಕಿ ಮಧುಪ್ರಿಯಾ, ಸಂಘಟನೆಯ ಕಾರ್ಯದರ್ಶಿ ರತ್ನಮ್ಮ, ಸಹ ಕಾರ್ಯದರ್ಶಿ ಮಂಜುಳಾ, ಜಂಟಿ ಕಾರ್ಯದರ್ಶಿಗಳು ರಾಧಾ, ಉಮಾ, ಮುನಿರತ್ನ, ಶಾಂತಮ್ಮ, ಭಾಗ್ಯಮ್ಮ, ಪದ್ಮಾ, ಜಯಮಂಗಲ, ಗೀತಾ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version