Gudibande : ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ (Hampasandra) ಗ್ರಾಮ ಪಂಚಾಯಿತಿ ಕಾರ್ಯಾಲಯದ ವತಿಯಿಂದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು (Rural Sports meet) ಆಯೋಜಿಸಲಾಗಿತ್ತು.
ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಂಪಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ “ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಕ್ರೀಡಾಕೂಟ ಆಯೋಜನೆ ಮಾಡಿರುವುದು ಸಂತಸದ ವಿಷಯ. ಪ್ರತಿ ವರ್ಷವು ಇದೇ ರೀತಿ ಕ್ರೀಡೆ ನಡೆಸಿ ನಂತರ ತಾಲ್ಲೂಕು ಮಟ್ಟ, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಭಾಗವಹಿಸುವಂತೆ ಅವಕಾಶ ಮಾಡಿಕೊಡಬೇಕೆಂದು” ಹೇಳಿದರು.
ಕ್ರೀಡಾಕೂಟದಲ್ಲಿ 5 ಕಬಡ್ಡಿ ತಂಡಗಳು, ಎರಡು ಕೊಕ್ಕೊ ತಂಡಗಳು ಹಾಗೂ ಕುಸ್ತಿ ಪಟುಗಳು ಭಾಗವಹಿಸಿದ್ದರು. ಕಬಡ್ಡಿಯಲ್ಲಿ ಪಸುಪಲೋಡು ಗ್ರಾಮಸ್ಥರು ಪ್ರಥಮ ಸ್ಥಾನ, ಕೊಕ್ಕೊ ವಿಭಾಗದಲ್ಲಿ ಚೆಂಡೂರು ಗ್ರಾಮಸ್ಥರು ಪ್ರಥಮ ಸ್ಥಾನ ಪಡೆದರು.
ಪಿಡಿಒ ಮಮತ, ಗ್ರಾ.ಪಂ ಉಪಾಧ್ಯಕ್ಷ ಎನ್.ನಾಗರಾಜ, ನಾಗರಾಜು, ವಿನೋದ್ ಕುಮಾರ್ ಮಠಪತಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.