Chintamani : ಚಿಂತಾಮಣಿ ತಾಲ್ಲೂಕಿನ ಪ್ರಸಿದ್ಧ ಕೈವಾರದ ಅಮರನಾರೇಯಣಸ್ವಾಮಿ ಬ್ರಹ್ಮರಥೋತ್ಸವವು (Kaiwara AmaraNareyana Swamy Temple Brahma Rathotsava) ಮಾರ್ಚ್ 18ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನೆಡೆಯಲಿದೆ. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಕೃಷ್ಣಗಂಧೋತ್ಸವ ಸೇವೆಯನ್ನು ಯೋಗಿನಾರೇಯಣ ತಾತಯ್ಯ ಅವರ ವತಿಯಿಂದ ಸಮರ್ಪಿಸಲಿದ್ದಾರೆ.
ಮಾರ್ಚ್ 13 ಭಾನುವಾರ ರಥೋತ್ಸವದ ಕಾರ್ಯಕ್ರಮ ಆರಂಭಾಗಿದ್ದು ಮಾರ್ಚ್ 29 ರವರೆಗೂ 18 ದಿನ ಪ್ರತಿನಿತ್ಯ ವಿಶೇಷ ಅಲಂಕಾರ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಯಲಿದೆ. ಪ್ರತಿದಿನವೂ ರಾತ್ರಿ ವಿಶೇಷ ಸಿಂಹವಾಹನೋತ್ಸವ, ಹನುಮಂತವಾಹನೋತ್ಸವ, ಶೇಷವಾಹನೋತ್ಸವ, ಗರುಡೋತ್ಸವ, ಚಿತ್ರಗೋಪುರೋತ್ಸವ ಮುಂತಾದ ಹಲವಾರು ವಾಹನೋತ್ಸವಗಳನ್ನು ನಡೆಯಲಿವೆ.
ಭಾನುವಾರ ಅಂಕುರಾರ್ಪಣೆಯ ಅಂಗವಾಗಿ ಹೋಮ, ರಥಬೀದಿಯಲ್ಲಿ ಗರುಡಧ್ವಜ ಪ್ರದಕ್ಷಿಣೆಯೊಂದಿಗೆ ಮೆರವಣಿಗೆ, ದೇವಾಲಯದ ಧ್ವಜಸ್ತಂಭದ ಬಳಿ ಪೂಜೆ ಸಲ್ಲಿಸಿ ಧ್ವಜಾರೋಹಣ, ಶ್ರೀದೇವಿ ಭೂದೇವಿ ಸಮೇತ ಅಮರನಾರೇಯಣಸ್ವಾಮಿಯ ಉತ್ಸವವಿಗ್ರಹಗಳ ಮಂಟಪೋತ್ಸವ, ಬಲಿಪೀಠಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur