Chintamani : ದ್ವಾಪರ ಯುಗದಲ್ಲಿ ರಾಕ್ಷಸ ಬಕಾಸುರನನ್ನು (Bakasura) ಸೋಲಿಸಿದ ಭೀಮನು (Bheema) ಸ್ಥಾಪಿಸಿದನೆಂದು ನಂಬಲಾದ ಐತಿಹಾಸಿಕ ಮಹತ್ವವನ್ನು ಹೊಂದಿರುವ ಕೈವಾರ (Kaiwara) ಭೀಮಲಿಂಗೇಶ್ವರ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ (Bhimana Amavasya) ಪ್ರಯುಕ್ತ ಸಹಸ್ರ ನಾಮಾರ್ಚನೆಯೊಂದಿಗೆ ಪಾರ್ವತಿಗೆ ರುದ್ರಾಭಿಷೇಕ ಮತ್ತು ಅಭಿಷೇಕದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಲಾಗಿತ್ತು.
ಕೈವಾರವನ್ನು ಪಂಚಲಿಂಗ ಕ್ಷೇತ್ರ ಎಂದು ಕರೆಯಲ್ಪಡುತ್ತದೆ ಇದಕ್ಕೆ ಕಾರಣ ದೇವಾಲಯದ ಆವರಣದ ಒಳಗೆ, ಪಾಂಡವರು ಸ್ಥಾಪಿಸಿದ ಲಿಂಗಗಳು. ಹಾಗಾಗಿ ಭೀಮನ ಅಮಾವಾಸ್ಯೆಯಂದು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಕೈವಾರ ಕ್ಷೇತ್ರಕ್ಕೆ ಜನಸಾಗರವೇ ಹರಿದು ಬಂದಿತ್ತು. ಭೀಮಲಿಂಗೇಶ್ವರ ದೇವಸ್ಥಾನದ ಜೊತೆಗೆ ಅಮರ ನಾರಾಯಣ ದೇವಸ್ಥಾನ ಮತ್ತು ಯೋಗಿ ನಾರಾಯಣ ದೇವಸ್ಥಾನದಲ್ಲೂ ವಿಶೇಷ ಪ್ರಾರ್ಥನೆಗಳು ನಡೆದವು.