Sidlaghatta : ಸ್ವಸಾಯ ಸಂಘದ ಸದಸ್ಯರ ಮತ್ತು ವಿನಿಯೋಗದಾರರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ರಕ್ಷಾ ಕಾರ್ಡ್ ಮಾಡಿಸಿದ್ದು, ವಾರ್ಷಿಕ ಒಂದು ನೂರು ರೂ ಕಟ್ಟಿ, ಸದಸ್ಯತ್ವವನ್ನು ಹೊಂದಿದವರು ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದು ಶ್ರೀ॒ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ತಿಳಿಸಿದರು.
ನಗರದ ಶ್ರೀ॒ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ಪ್ರಗತಿ ಬಂಧು ಸ್ವಸಹಾಯ ಸಂಘದ 18 ಮಂದಿ ಸದಸ್ಯರಿಗೆ 2,42,440 ರೂ ಮೊತ್ತವನ್ನು ವಿತರಿಸಿ ಅವರು ಮಾತನಾಡಿದರು.
ಈ ವರ್ಷ ತಾಲ್ಲೂಕಿನಲ್ಲಿ 127 ಸದಸ್ಯರಿಗೆ ಒಟ್ಟು 11,11,396 ರೂ ಮೊತ್ತ ವಿತರಣೆ ಮಾಡಿರುವುದಾಗಿ ಹೇಳಿದರು.
ಇದರ ಜೊತೆಗೆ ಸಂಘದ ಸದಸ್ಯರಿಗೆ ಸ್ವ-ಉದ್ಯೋಗ, ಆರ್ಥಿಕ ವ್ಯವಹಾರದ ಬಗ್ಗೆ ಶಿಸ್ತು ಮೂಡಿಸುವಂತ ಕೆಲಸವನ್ನು ಯೋಜನೆ ಮಾಡುತ್ತಿದ್ದು ಜೊತೆಗೆ ಸಮುದಾಯದ ಪೂರಕವಾಗಿ ಹಲವಾರು ಕಾರ್ಯಚಟುವಟಿಕೆಗಳು ಬರುತ್ತಿರುವುದಾಗಿ ಹೇಳಿದರು.
ನಗರಸಭೆಯ ಪೌರಯುಕ್ತ ಶ್ರೀಕಾಂತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹತ್ತು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಸಮಾಜದಲ್ಲಿ ಪ್ರತಿಯೊಬ್ಬರಿಗೂ ನೆರವಾಗುತ್ತಿದೆ. ಬಡತನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿರುತ್ತಾರೆ ಎಂದು ಹೇಳಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಳ್ಳೂರು ಶಾಖೆಯ ಪ್ರಬಂಧಕ ಎಂ.ಸತ್ಯನಾರಾಯಣ್ ಮಾತನಾಡಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳಿಗೆ ಆರ್ಥಿಕ ಅಭಿವೃದ್ಧಿಯೊಂದಿಗೆ ಸಂಸ್ಥೆ, ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡು ಸದಸ್ಯರಿಗೆ ಪ್ರಗತಿ ನಿಧಿ ಸಾಲ ವಿತರಣೆ ಮಾಡಿ ಸಾವಿರಾರು ಕುಟುಂಬಗಳಿಗೆ ನೆರವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಎಸ್.ಸುರೇಶ್‌ಗೌಡ, ಕಚೇರಿ ಹಣಕಾಸು ಪ್ರಭಂದಕ ರಾಘವೇಂದ್ರ, ಕಚೇರಿ ಆಡಳಿತ ಪ್ರಬಂಧಕ ನವೀನ್ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು.