Gauribidanur : ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದ ಹೊರವಲಯದಲ್ಲಿ ಯೋಗಿ ನಾರೇಯಣ ಯತೀಂದ್ರ ಬಲಿಜ ಸಂಘದಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸದ್ಗುರು ಕೈವಾರದ ತಾತಯ್ಯ (Kaiwara Yogi Nareyana Temple) ದೇವಸ್ಥಾನದ ಬಾಗಿಲನ್ನು ಶುಕ್ರವಾರ ಜೋಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಲಿಜ ಸಂಘದ ಅಧ್ಯಕ್ಷ ಕೆ.ಎಂ.ರಮೇಶ್ “ಯೋಗಿ ನಾರೇಯಣತಾತಯ್ಯ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಜೀವನದ ಜಂಜಾಟದ ಬದುಕಿಗೆ ಮುಕ್ತಿ ದೊರೆಯಬೇಕಾದರೆ ತಾತಯ್ಯ ಬರೆದಿರುವ ಕಾಲಜ್ಞಾನ ಮತ್ತು ತಾತಯ್ಯರ ಕೀರ್ತನೆಗಳನ್ನು ಅಧ್ಯಯನ ಮಾಡಬೇಕು” ಎಂದು ತಿಳಿಸಿದರು.
ಬಲಿಜ ಸಂಘದ ಉಪಾಧ್ಯಕ್ಷ ಕೆ.ಎಚ್.ರಮೇಶ್, ಕಾರ್ಯದರ್ಶಿ ನಾಗಭೂಷಣ, ಎಂ.ಶಿವಕುಮಾರ್, ಗೋವಿಂದಪ್ಪ, ಪ್ರದೀಪ್, ಕಂಬಕ್ಕ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.