Chikkaballapur : ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) (KaSaPa) ಪದಾಧಿಕಾರಿಗಳು ಚಿಕ್ಕಬಳ್ಳಾಪುರ ನಗರದ ನಂದಿ ರಂಗ ಮಂದಿರ (Nandi Ranga Mandapa) ದ ದುರಸ್ತಿ (Renovation) ಗೆ ಕ್ರಮಕೈಗೊಳ್ಳುವಂತೆ ಕೋರಿ ಹೆಚ್ಚುವರಿ ಜಿಲ್ಲಾಧಿಕಾರಿ (Additional Deputy Commissioner) ತಿಪ್ಪೇಸ್ವಾಮಿ ಅವರಿಗೆ ಗುರುವಾರ ಮನವಿ ಪತ್ರ ನೀಡಿದರು. ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಮಾತನಾಡಿ “ರಂಗ ಮಂದಿರದಲ್ಲಿರುವ ಕಸಾಪ ಕಚೇರಿಯ ಕೊಠಡಿಗಳ ಚಾವಣಿ ಮಳೆ ಬಂದಾಗ ಸೋರುತ್ತಿದ್ದು ಕೊಠಡಿಯಲ್ಲಿದ್ದ ಸಾಹಿತಿಗಳ ಭಾವಚಿತ್ರಗಳು ಹಾಳಾಗಿದ್ದಲ್ಲದೇ ಸಾಹಿತ್ಯ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಶೀಘ್ರವಾಗಿ . ಕಟ್ಟಡ ದುರಸ್ತಿ ಮಾಡಿಸಿ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು” ಎಂದು ತಿಳಿಸಿದರು.
ತಾಲ್ಲೂಕು ಕಸಾಪ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಸರ್ದಾರ್ ಚಾಂದ್ ಪಾಷ, ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ ಪಟೇಲ್ ನಾರಾಯಣಸ್ವಾಮಿ, ತಾಲ್ಲೂಕು ಸಮಿತಿಯ ಜಂಟಿ ಕಾರ್ಯದರ್ಶಿ ಡಿ.ಎಂ.ಶ್ರೀರಾಮ್, ಪ್ರತಿನಿಧಿಗಳಾದ ರವಿಕುಮಾರ್, ಸುಶೀಲಾ ಮಂಜುನಾಥ್, ಅಣ್ಣಮ್ಮ ಮತ್ತಿತರರು ಉಪಸ್ಥಿತರಿದ್ದರು.