Chintamani : ಅಕ್ಟೋಬರ್ 9 ಮತ್ತು 10 ರಂದು ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ (Murugamalla) ದ ಅಮ್ಮಾಜಾನ್ ಬಾವಾಜಾನ್ ದರ್ಗಾ (Hazrat AmmaJaan BawaJaan Dargah) ದಲ್ಲಿ ಉರುಸ್ (Urus) ನಡೆಯಲ್ಲಿರುವ ಹಿನ್ನೆಲೆ ಗುರುವಾರ ದರ್ಗಾದಲ್ಲಿ ತಹಶೀಲ್ದಾರ್ ಮುನಿಸ್ವಾಮಿರೆಡ್ಡಿ ನೇತೃತವಾದಲ್ಲಿ ಶಾಂತಿ ಸಭೆ (Peace Meeting) ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮುನಿಸ್ವಾಮಿರೆಡ್ಡಿ “ಮುರುಗಮಲ್ಲ ಹಿಂದು-ಮುಸ್ಲಿಂ ಭಾವೈಕ್ಯತೆಯ ಕೇಂದ್ರ ಎಂದು ದೇಶದಾದ್ಯಂತ ಪ್ರಸಿದ್ಧಿಯಾಗಿದ್ದು ಈ ಹೆಸರನ್ನು ಉಳಿಸಲು ಮತ್ತು ಶಾಂತಿಯುತವಾಗಿ ಉರುಸ್ ನಡೆಸಲು ಜನರು ಸಹಕಾರ ನೀಡಬೇಕು. ಉರುಸ್‌ನಲ್ಲಿ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಕಾರ್ಯಕ್ರಮದ ಆಚರಣಾ ಸಮಿತಿ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಯುವಕರಿಂದ ಸಣ್ಣ-ಪುಟ್ಟ ತಪ್ಪು ಘಟನೆಗಳು ನಡೆದರೆ, ಹಿರಿಯಲು ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು” ಎಂದು ಹೇಳಿದರು.
ಸಭೆಯಲ್ಲಿ ಎಎಸ್ಪಿ ಕುಶಾಲ್ ಚೌಕ್ಸೆ, ವಕ್ಫ್ ಬೋರ್ಡ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಮುಜಮಿಲ್ ಪಾಷಾ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಅನ್ಸರ್ ಖಾನ್, ದರ್ಗಾ ಮೇಲ್ವಿಚಾರಕ ತಯ್ಯೂಬ್ ನವಾಜ್, ಆರಿಫ್ ಖಾನ್, ಉರುಸ್ ಆಚರಣಾ ಸಮಿತಿ ಪದಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರು ಭಾಗವಹಿಸಿದ್ದರು.