Devaramallur, Sidlaghatta : ಹೈನುಗಾರಿಕೆಯಲ್ಲಿ ನೂತನ ಪದ್ದತಿಯ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಂಡಾಗ ಮಾತ್ರ ಹೈನುಗಾರಿಕೆಯಲ್ಲಿ ಲಾಭವನ್ನು ಕಾಣಲು ಸಾಧ್ಯ ಎಂದು ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ರಾಮಯ್ಯ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಸಾಮೂಹಿಕ ಹಾಲು ಕರೆಯುವ ಯಂತ್ರಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಹೈನುಗಾರಿಕೆಯು ಈ ಮೊದಲಿನಂತಿಲ್ಲ. ಉದ್ಯಮದ ರೂಪ ಪಡೆದುಕೊಳ್ಳುತ್ತಿದೆ. ಈ ಮೊದಲು ರೈತರು ಇದನ್ನು ಉಪ ಕಸುಬನ್ನಾಗಿ ಮಾಡುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಪೂರ್ಣಾವಧಿ ಕಸುಬನ್ನಾಗಿ ಕೈಗೊಳ್ಳುತ್ತಿದ್ದಾರೆ ಎಂದರು.
ಆದರೂ ತಾಂತ್ರಿಕತೆಯನ್ನು ಬಳಸಿಕೊಳ್ಳದಿದ್ದರೆ ಯಶಸ್ಸು ಕಾಣಲು ಕಷ್ಟ ಸಾಧ್ಯವಿಲ್ಲ. ಹಾಗಾಗಿ ರೈತರು ತಾಂತ್ರಿಕತೆಗೆ ಹೆಚ್ಚಿನ ಆಧ್ಯತೆ ನೀಡಬೇಕು, ಇದರಿಂದ ರಾಸುಗಳಿಗೆ ತಗಲುವ ರೋಗಗಳ ಪ್ರಮಾಣ ಕಡಿಮೆ ಆಗಲಿದೆ, ಉತ್ಪಾದನಾ ವೆಚ್ಚವೂ ಕಡಿಮೆ ಆಗಲಿದೆ ಎಂದು ಹೇಳಿದರು.
ಸಾಮೂಹಿಕ ಹಾಲು ಕರೆಯುವ ಯಂತ್ರಗಳ ಬಳಕೆಯಿಂದ ಸೀಮೆ ಹಸುಗಳಿಗೆ ತಗಲುವ ರೋಗಗಳ ಪ್ರಮಾಣ ಕಡಿಮೆ ಆಗಲಿದೆ. ಹಾಲು ಇನ್ನಷ್ಟು ಪರಿಶುದ್ಧವಾಗಲಿದೆ. ಗುಣಮಟ್ಟದ ಹಾಲಿನ ಉತ್ಪಾದನೆಯೂ ಅಗಲಿದೆ ಎಂದು ಆಶಿಸಿದರು.
ಡೇರಿ ಆವರಣದಲ್ಲಿ ಅಳವಡಿಸಿರುವ ಸಮೂಹಿಕ ಹಾಲು ಕರೆಯುವ ಯಂತ್ರದಲ್ಲಿ ಸೀಮೆ ಹಸುವೊಂದರಲ್ಲಿ ಹಾಲು ಕರೆಯುವುದಕ್ಕೆ ಚಾಲನೆ ನೀಡಲಾಯಿತು.
ದೇವರಮಳ್ಳೂರು ಡೇರಿ ಅಧ್ಯಕ್ಷ ಕಂಪನಿ ರವಿಚಂದ್ರ, ಕೆ.ಗುಡಿಯಪ್ಪ, ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ರವಿಕಿರಣ್, ವಿಸ್ತರಣಾಕಾರಿ ವಿ.ಶ್ರೀನಿವಾಸ್, ಗ್ರಾಮದ ಮುಖಂಡರಾದ ಸಿ.ಎಂ.ಸೊಣ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಬಿ.ಎಲ್.ನಂಜುಂಡಪ್ಪ, ಕೃಷ್ಣಪ್ಪ, ವೆಂಕಟರಾಯಪ್ಪ, ದೇವರಾಜ್, ಲಕ್ಷ್ಮಯ್ಯ, ನಾಗರಾಜ್, ಲಕ್ಷ್ಮಮ್ಮ, ಭಾಗ್ಯಮ್ಮ, ಹಾಗೂ ಡೇರಿ ಸಿಇಒ ಮಂಜುನಾಥ್, ಆನಂದ, ಶ್ರೀನಿವಾಸ್, ಸೇರಿದಂತೆ ಎಲ್ಲ ನಿರ್ದೇಶಕರು, ಗ್ರಾಮಸ್ಥರು, ಹಾಲು ಉತ್ಪಾದಕರು ಹಾಜರಿದ್ದರು.