Gauribidanur : ಮಕ್ಕಳ ದಿನಾಚರಣೆ (Children’s Day)ಯ ಅಂಗವಾಗಿ ಮಂಗಳವಾರ ಲಯನ್ಸ್ ಸಂಸ್ಥೆಯಿಂದ ಉಡುಮಲೋಡು ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು.
ಸರ್ಕಾರಿ ಶಾಲೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದು, ಸರ್ಕಾರದ ಜತೆಗೆ ಸ್ಥಳೀಯ ದಾನಿಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಬಲ್ಲ ಕಲಿಕಾ ಪರಿಕರಗಳನ್ನು ನೀಡಿದಲ್ಲಿ ಅವರ ಕಲಿಕೆಗೆ ಮತ್ತಷ್ಟು ಪ್ರೇರಣೆ ಸಿಗಲಿದೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ವೈ.ಎನ್.ಅಂಬಿಕಾ ಹೇಳಿದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಶಿಕ್ಷಕರು ಕಲಿಸುವ ಪ್ರಯತ್ನ ಮಾಡಬೇಕು. ಇದರಿಂದಾಗಿ ಮಕ್ಕಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಸಂಸ್ಥೆಯ ಪದಾಧಿಕಾರಿ ಜಿ.ಎನ್.ಸೂರಜ್ ತಿಳಿಸಿದರು.
ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಿ, ಪದಾಧಿಕಾರಿಗಳಾದ ಪ್ರೊ.ಕೆ.ರಾಮಾಂಜನೇಯಲು, ಜಬೀ, ನಾಗಾರಾಮ್, ಶಿಕ್ಷಕ ಬಾಲಪ್ಪ, ಕಲ್ಪನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.