Gauribidanur : ಜುಲೈ 2ರಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿಗೊಳಿಸದೆ ನಿರ್ಲಕ್ಷ್ಯ ಮಾಡುತ್ತಿರುವ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ (Bangalore – Hyderabad National Highway) ಹಾಗೂ ಕರ್ನಾಟಕದ (Karnataka) ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಏಕಕಾಲದಲ್ಲಿ ಬಂದ್ ಮಾಡಲಾಗುವುದು ಮತ್ತು ಜುಲೈ 3ರಂದು ತಾಲ್ಲೂಕಿನಿಂದ ಹೈದ್ರಾಬಾದ್ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ಸಮಿತಿಯ ತಾಲ್ಲೂಕು ಅಧ್ಯಕ್ಷ ಆರ್.ಜಿ.ನಾಗರಾಜ್ ಹೇಳಿದರು.
ನ್ಯಾಯಮೂರ್ತಿ ಎ.ಜೆ.ಸದಾಶಿವ (Justice A J Sadashiv) ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಸಮಿತಿಯ ಮುಖಂಡರು ಗೌರಿಬಿದನೂರು ಅಂಬೇಡ್ಕರ್ (Ambedkar) ವೃತ್ತದ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ (Protest) ಮಾಡಿದರು.
ಜಿಲ್ಲಾ ಅಧ್ಯಕ್ಷ ಜಿ.ಗೋಪಾಲ್, ಮುಖಂಡ ಕೃಷ್ಣಪ್ಪ, ಗಂಗಾಧರಪ್ಪ, ಎಂ.ಜಿ.ಗೋಪಾಲ್, ಜೈರಾಮ್, ಮೂರ್ತಿ, ಶಾಸ್ತ್ರಿ, ಸರಸ್ವತಮ್ಮ, ನಾಗೇಶ್, ಪ್ರಭಾಕರ್, ನರಸಿಂಹಯ್ಯ, ಸುಬ್ರಮಣ್ಯ, ಶಂಕರ, ಲಕ್ಷ್ಮೀಪತಿ, ರಾಮಾಂಜಿನಪ್ಪ, ನರಸಿಂಹಪ್ಪ ಉಪಸ್ಥಿತರಿದ್ದರು.