Bagepalli : ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜಿ (National College) ನಲ್ಲಿ ಶನಿವಾರ ರಾಷ್ಟ್ರೀಯ ಶಿಕ್ಷಣ ನೀತಿ (National Policy on Education) ಕುರಿತ ಕಾರ್ಯಾಗಾರ (Workshop) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಮುಖ್ಯಸಚೇತಕ ಡಾ.ವೈ.ಎನ್.ನಾರಾಯಣಸ್ವಾಮಿ (Y N Narayanaswamy) “‘ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆಯ ಜತೆಗೆ ಕಲಿಕೆಯ ಸಾಮರ್ಥ್ಯವನ್ನು ಹಾಗೂ ಕೌಶಲವನ್ನು ವೃದ್ಧಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಿಕ್ಷಕ, ಶಿಕ್ಷಕಿಯರು ಸಂಪೂರ್ಣವಾಗಿ ಅನುಷ್ಠಾನ ಮಾಡಲು ಸಹಕರಿಸಬೇಕು. BJP ಸರ್ಕಾರದ ಅನುಷ್ಠಾನ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನಕ್ಕೆ ಹೊಸ ಆಯಾಮ ನೀಡಿ ಶಾಲೆಯಿಂದ ಹೊರಗಿರುವ 2 ಕೋಟಿ ಮಕ್ಕಳು ಮುಖ್ಯವಾಹಿನಿಗೆ ತಂದು ಯುವಕರ ಭವಿಷ್ಯ ರೂಪಿಸುವಂತೆ ಮಾಡಿದೆ. ಇದರ ಅಡಿಯಲ್ಲಿ 1 ರಿಂದ 12ನೇ ತರಗತಿಯವರೆಗೂ ಶಿಕ್ಷಣ ಮತ್ತು 3 ವರ್ಷಗಳ ಅಂಗನವಾಡಿ (Anganwadi) ಶಾಲಾ ಶಿಕ್ಷಣ ಪದ್ಧತಿ ಜಾರಿ ಆಗಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರ, ಬಡ್ತಿ ಶಿಕ್ಷಕರ ಸಮಸ್ಯೆಗಳನ್ನು ಹಾಗೂ 7ನೇ ವೇತನ ಆಯೋಗದ ವಿಧಾನವನ್ನು ಪರಿಷತ್ (Vidhana Parishat) ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಮಾಡಿ ಕಾರ್ಯಗತಗೊಳಿಸಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ, ನ್ಯಾಷನಲ್ ಪದವಿ ಕಾಲೇಜಿನ ಪ್ರೊ.ಕೆ.ಟಿ.ವೀರಾಂಜನೇಯ, ತಾಲ್ಲೂಕು ಕ್ಷೇತ್ರ ಸಮನ್ವಯಾಧಿಕಾರಿ ಆರ್.ವೆಂಕಟರಾಮ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣ ರೆಡ್ಡಿ, ಶಿಕ್ಷಣ ಸಂಯೋಜಕ ರಾಜಣ್ಣ, ಕೆ.ಬಿ.ಆಂಜನೇಯರೆಡ್ಡಿ, ಬಾಲರಾಜು, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ವೆಂಕಟರವಣಪ್ಪ, ಉಪನ್ಯಾಸಕ ಎನ್.ನಾಗರಾಜ್, ವೆಂಕಟೇಶ್‍ಬಾಬು, ಕೆ.ವಿ.ಶ್ರೀನಿವಾಸ್, ಆರ್.ಶಿವಪ್ಪ, ಬೈರೆಡ್ಡಿ, ಜಿ.ರಾಮಸುಬ್ಬಮ್ಮ, ರಾಜರಾಜೇಶ್ವರಿ, ರಶೀದಾಬೇಗಂ, ಕೆ.ವಿ.ವಾಣಿಶ್ರೀ, ಉಮಾ, ಪ್ರಶಾಂತಿ ಮತ್ತಿತರರು ಭಾಗವಹಿಸಿದರು.