Gauribidanur : ಗೌರಿಬಿದನೂರು ನಗರದ ಹೊರವಲಯದ NSL ಸಕ್ಕರೆ ಕಾರ್ಖಾನೆ (NSL Sugar Factory) ಆಡಳಿತ ಮಂಡಳಿಯು ಯಂತ್ರೋಪಕರಣ ಮತ್ತು ಗುಜರಿ ವಸ್ತುಗಳನ್ನು ನ್ಯಾಯಾಲಯದ ಆದೇಶ ಧಿಕ್ಕರಿಸಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರ ಬಾಕಿ ವೇತನ ನೀಡಬೇಕು ಎಂದು ಆರೋಪಿಸಿ ಕಾರ್ಮಿಕರು ಕಾರ್ಖಾನೆ (Labor Protest) ಎದುರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ “ಕಾನೂನು ರೀತಿಯಲ್ಲಿ ಕಾರ್ಖಾನೆ ಖರೀದಿಯಾಗಿಲ್ಲ. ಷೇರುದಾರರಿಗೆ ಷೇರು ಹಣ ಮರುಪಾವತಿಸಿ, ಕಾರ್ಮಿಕರಿಗೆ ವೇತನ ಬಾಕಿಯನ್ನು ನೀಡಬೇಕು. ಈ ಬಗ್ಗೆ ಸಹಕಾರ ಸಚಿವರ ಬಳಿ ಚರ್ಚಿಸಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೂ ಕಾರ್ಖಾನೆಯಲ್ಲಿ ಯಾವುದೇ ರೀತಿ ಸ್ಕ್ರಾಪ್ ತೆಗೆಯುವಂತಿಲ್ಲ” ಎಂದು ಸೂಚಿಸಿದರು.
ರೈತ ಸಂಘದ ಅಧ್ಯಕ್ಷ ಲೋಕೇಶ್‍ಗೌಡ, ಕಾರ್ಯದರ್ಶಿ ಜಿ.ರಾಜಣ್ಣ, ಮುದ್ದುರಂಗಪ್ಪ, ಮುಖಂಡರಾದ ವಿ.ವೆಂಕಟೇಶ್, ಜಿ.ಆರ್.ನವೀನ್ , ಪ್ರವೀಣ್ ಕುಮಾರ್, ಮೆಹಬೂಬ್, ಇಕ್ಬಾಲ್ ಮತ್ತು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.