Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶನಿವಾರ ಮಳೆ ಹಾನಿ ಬಗ್ಗೆ ಅಧ್ಯಯನ ಮಾಡಲು ಆಗಮಿಸಿರುವ ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥ ಸುಶಿಲ್ ಪಾಲ್ ಮತ್ತು ಸದಸ್ಯ ಸುಭಾಷ್ ಚಂದ್ರ ಅವರಿಗೆ ಜಿಲ್ಲಾಧಿಕಾರಿ ಆರ್. ಲತಾ (Deputy Commissioner R Latha) ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪಂಚಾಯಿತಿಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ (Sir M.V. Stadium, Chikkaballapur) ಅಕ್ಟೋಬರ್ ತಿಂಗಳಿನಿಂದ ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಣಾಮ ಸಂಭವಿಸಿರುವ ಹಾನಿ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಮನೆ ಹಾನಿ
- ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಒಟ್ಟು ಮನೆಗಳಿಗೆ ಹಾನಿ – 1,953
- ಚಿಕ್ಕಬಳ್ಳಾಪುರ ತಾಲ್ಲೂಕು – Chikkaballapur Taluk – 312
- ಬಾಗೇಪಲ್ಲಿ ತಾಲ್ಲೂಕು – Bagepalli Taluk – 151
- ಚಿಂತಾಮಣಿ ತಾಲ್ಲೂಕು – Chintamani Taluk – 573
- ಗೌರಿಬಿದನೂರು ತಾಲ್ಲೂಕು – Gauribidanur Taluk – 434
- ಗುಡಿಬಂಡೆ ತಾಲ್ಲೂಕು – Gudibande Taluk – 97 ಮತ್ತು
- ಶಿಡ್ಲಘಟ್ಟ ತಾಲ್ಲೂಕು – Sidlaghatta Taluk – 386
ಬೆಳೆ ಹಾನಿ
2021-22ನೇ ಸಾಲಿನಲ್ಲಿ ರಾಗಿ, ಜೋಳ, ಶೇಂಗಾ, ತೊಗರಿ, ಭತ್ತ ಮತ್ತು ಇತರೆ ಕೃಷಿ ಬೆಳೆ (Agriculture Crops) ಸೇರಿದಂತೆ
- ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ – 61,648 ಹೆಕ್ಟೇರ್ (Hectare) ಕೃಷಿ ಪ್ರದೇಶ ಹಾನಿ
- ಚಿಕ್ಕಬಳ್ಳಾಪುರ ತಾಲ್ಲೂಕು – Chikkaballapur Taluk – 9,298 ಹೆಕ್ಟೇರ್ (Hectare)
- ಚಿಂತಾಮಣಿ ತಾಲ್ಲೂಕು – Chintamani Taluk – 10,785 ಹೆಕ್ಟೇರ್ (Hectare)
- ಬಾಗೇಪಲ್ಲಿ ತಾಲ್ಲೂಕು – Bagepalli Taluk – 13,300 ಹೆಕ್ಟೇರ್ (Hectare)
- ಗೌರಿಬಿದನೂರು ತಾಲ್ಲೂಕು – Gauribidanur Taluk – 13,230 ಹೆಕ್ಟೇರ್ (Hectare)
- ಗುಡಿಬಂಡೆ ತಾಲ್ಲೂಕು – Gudibande Taluk – 6,409 ಹೆಕ್ಟೇರ್ (Hectare)
- ಶಿಡ್ಲಘಟ್ಟ ತಾಲ್ಲೂಕು – Sidlaghatta Taluk – 8626 ಹೆಕ್ಟೇರ್ (Hectare) ಪ್ರದೇಶದ ಕೃಷಿ ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿದೆ.
ಟೊಮೆಟೊ (Tomato), ಆಲೂಗಡ್ಡೆ (Potato), ಈರುಳ್ಳಿ (Onion), ಕ್ಯಾರೆಟ್ (Carrot), ಕೋಸು (Cabbage), ಗುಲಾಬಿ (Rose), ದ್ರಾಕ್ಷಿ (Grapes), ಪಪ್ಪಾಯ (Papaya) ಮತ್ತು ಇತರೆ ಬೆಳೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 10,683 ರೈತರ 7,292.32 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗೆ (Horticulture Crops) ಹಾನಿಯಾಗಿದೆ ಎಂದು ಜಿಲಾಧಿಕಾರಿ ಆರ್.ಲತಾ ತಿಳಿಸಿದರು.
ರೇಷ್ಮೆ ಕೃಷಿಗೆ (Sericulture) ಪ್ರಸಿದ್ದಿಯಾಗಿರುವ ಜಿಲ್ಲೆಯಲ್ಲಿ ಒಟ್ಟು 21,443.05 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬಿತ್ತನೆಯಾಗಿದ್ದು, 199 ರೇಷ್ಮೆ ಕೃಷಿ ಬೆಳೆಗಾರರ 109.08 ಹೆಕ್ಟೇರ್ ಪ್ರದೇಶದ ರೇಷ್ಮೆ ಬೆಳೆಯು ಮಳೆಗೆ ಹಾನಿಯಾಗಿರುತ್ತದೆ. ಅಲ್ಲದೇ ಜಿಲ್ಲೆಯಾದ್ಯಂತ ದನ, ಕರು, ಕುರಿ, ಮೇಕೆ ಸೇರಿದಂತೆ ಒಟ್ಟು 53 ಜಾನುವಾರು ಸತ್ತಿವೆ ಎಂಬ ಮಾಹಿತಿಯನ್ನು ಕೇಂದ್ರ ತಂಡಕ್ಕೆ ನೀಡಿದರು.
ಕೇಂದ್ರ ತಂಡ ಅಜ್ಜವಾರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ, ಶಿಡ್ಲಘಟ್ಟ ನಗರದಲ್ಲಿ ಮನೆ ಹಾನಿ, ಪಿಲ್ಲಗುಂಡ್ಲಹಳ್ಳಿ, ಚಿಕ್ಕಬಂದರಘಟ್ಟ ಮತ್ತು ದೊಡ್ಡ ಬಂದರಘಟ್ಟ ಗ್ರಾಮ ಹಾಗು ಹಲವು ಪ್ರದೇಶಗಳ ವ್ಯಾಪ್ತಿಯ ರಸ್ತೆ ಮತ್ತು ಸೇತುವೆಗಳು, ಬೆಳೆಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆಯಿತು.
ಕೆಎಸ್‌ಡಿಎಂಎ ಆಯುಕ್ತ ಡಾ.ಮನೋಜ್ ರಾಜನ್, ಹೆಚ್ಚುವರಿ ನಿರ್ದೇಶಕ ಬಿ. ಬಸವರಾಜು, ಹೆಚ್ಚುವರಿ ತೋಟಗಾರಿಕಾ ನಿರ್ದೇಶಕ ಬಿ.ಕೆ. ದುಂಡಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್. ರಘುನಂದನ್, ಜಂಟಿ ಕೃಷಿ ನಿರ್ದೇಶಕಿ ಎಲ್. ರೂಪಾ, ತೋಟಗಾರಿಕೆ ಉಪ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು.