Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ‘ರಸ್ತೆ ಸುರಕ್ಷತಾ ಸಮಿತಿ’(Road Safety Committee) ಸಭೆ (Meeting) ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ “ಇತ್ತೀಚಿಗೆ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಪೈಪೋಟಿಗೆ ಇಳಿದು ನಾ ಮುಂದು ತಾ ಮುಂದು ಎಂಬಂತೆ ಸಾರಿಗೆ ಸೇವೆ ನೀಡಬಾರದು. ಇದರಿಂದ ಅಪಘಾತವಾಗುವ ಸಂಭವ ಇರುತ್ತದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬೇಕು. ಈಶ ಫೌಂಡೇಶನ್ ಸ್ಥಾಪನೆ ನಂತರ ಮತ್ತು ಕಲ್ಲು ಗಣಿಗಾರಿಕೆ ವಾಹನಗಳ ಸಂಚಾರದಿಂದ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಗುರುತಿಸಲ್ಪಡುವ ಹಾಗೂ ಗುರುತಿಸಿರುವ ಕಪ್ಪುಚುಕ್ಕೆ (Block Spots) ಸ್ಥಳಗಳು ಹಾಗೂ ಅಪಘಾತ ಪೀಡಿತ ವಲಯಗಳ ಸರಿಪಡಿಸುವಿಕೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಗಿರೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ವಿವೇಕಾನಂದ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ವೇಣುಗೋಪಾಲ ರೆಡ್ಡಿ ಹಾಗೂ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಪಾಲ್ಗೊಂಡಿದ್ದರು.
[…] […]