Bodaguru, Sidlaghatta : ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ಉತ್ತರ ವಲಯದ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವೈಟ್ ಫೀಲ್ಡ್ ನ ವೈದೇಹಿ ಆಸ್ಪತ್ರೆಯ ವೈದ್ಯಕೀಯ ತಂಡದಿಂದ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ವಿವಿಧ ತಜ್ಞ ವೈದ್ಯರು ಆಗಮಿಸಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ, ಉಚಿತವಾಗಿ ಔಷಧಿಗಳನ್ನು ನೀಡಿದರು.
ಆನೂರು ಗ್ರಾಮ ಪಂಚಾಯಿತಿ ಪಿಡಿಒ ಕಾತ್ಯಾಯಿನಿ, ಉಪಾಧ್ಯಕ್ಷ ವಿಶ್ವಾಸ್, ಆರೋಗ್ಯ ಶಿಬಿರದ ಸಂಯೋಜಕ ಹರೀಶ್ ಗೌಡ, ಶಾಲಾ ಮುಖ್ಯಶಿಕ್ಷಕ ವಿಶ್ವನಾಥ್, ಪ್ರಗತಿಪರ ರೈತ ಬೋದಗೂರು, ವೆಂಕಟಸ್ವಾಮಿರೆಡ್ಡಿ, ಜಿ.ಕೆ.ಮುನಿರಾಜು ಹಾಜರಿದ್ದರು.