Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಬುಧವಾರ ಶ್ರೀ ನಾಗಲಮುದ್ದಮ್ಮದೇವಿ, ಶ್ರೀ ಮಹಾಗಣಪತಿ ಮತ್ತು ಬಾಲಸುಬ್ರಹ್ಮಣ್ಯ ಸ್ವಾಮಿ ಸ್ಥಿರಬಿಂಬ ಹಾಗೂ ಧ್ವಜಸ್ತಂಭ ಪ್ರತಿಷ್ಠಾಪನಾ ಮಹೋತ್ಸವದ 48 ನೇ ದಿನದ ಮಂಡಲಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ದೇವರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಅದಾದ ನಂತರ ಪ್ರತಿದಿನ ಪೂಜಾ ವಿಧಿಗಳನ್ನು ಶಾಸ್ತ್ರೋಕ್ತವಾಗಿ 48 ದಿನಗಳು ನಡೆಸಿ, ಮಂಡಲ ಪೂಜೆಯನ್ನು ಗ್ರಾಮದ ಮಹಿಳೆಯರು ದೀಪಗಳನ್ನು ಹೊತ್ತು ಮೆರವಣಿಯ ಮೂಲಕ ಸಾಗಿ ಪೂಜೆ ಸಲ್ಲಿಸುವ ಮೂಲಕ ನೆರವೇರಿಸಲಾಯಿತು.
ಮಳ್ಳೂರು ಹರೀಶ್, ಬಿ.ಎಮ್.ದೇವರಾಜ್, ಅಮರಣ್ಣ, ಪಿ.ಎಂ.ಮಧು, ವಿ.ಎಂ.ಹರೀಶ್, ಮುನಿಕೃಷ್ಣಪ್ಪ, ಕಾಕಚೊಕ್ಕಂಡಹಳ್ಳಿ ನಾಗಣ್ಣ, ಕೊತ್ತನೂರು ಸತೀಶ್, ಕಿರಣ್, ದೇವಾಲಯದ ಭಕ್ತಾದಿಗಳು ಮತ್ತು ಕುಲಸ್ತರು ಹಾಜರಿದ್ದರು.