Home Chintamani ಭಾರತೀಯ ಕಿಸಾನ್ ಸಂಘದ ಅಭ್ಯಾಸವರ್ಗ ಕಾರ್ಯಕ್ರಮ

ಭಾರತೀಯ ಕಿಸಾನ್ ಸಂಘದ ಅಭ್ಯಾಸವರ್ಗ ಕಾರ್ಯಕ್ರಮ

0
Bharatiya Kisan Sangh Workshop Kaiwara

Chintamani : ಭಾರತೀಯ ಕಿಸಾನ್ ಸಂಘ (Bharatiya Kisan Sangh) ಚಿಂತಾಮಣಿ ಘಟಕ ವತಿಯಿಂದ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ (Sri Kaiwara Yogi Nareyana Mutt) ಭಾನುವಾರ ತಾಲ್ಲೂಕು ಅಭ್ಯಾಸವರ್ಗ (Workshop) ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ (Dr M R Jayaram) “ಭೂಮಿ ಫಲವತ್ತಾಗಿದ್ದರೆ ಮಾತ್ರ ರೈತ (Farmer) ಉಳಿಯಲು ಸಾಧ್ಯ ಭೂಮಿಯ ಫಲವತತ್ತೆಯ ಬಗ್ಗೆ ರೈತರು ಹೆಚ್ಚು ಗಮನ ನೀಡಬೇಕು. ನಮ್ಮ ಪೂರ್ವಿಕರು ಯಾವುದೇ ರಾಸಾಯನಿಕ (Chemicals) ಬಳಸದೇ ನೈಸರ್ಗಿಕವಾಗಿ ಕೃಷಿ ಮಾಡುತ್ತಿದ್ದರಿಂದ ಭೂಮಿ ಆರೋಗ್ಯವಾಗಿತ್ತು. ಈಗ ಕೃಷಿ ಚಟುವಟಿಕೆಯಲ್ಲಿ ರಾಸಾಯನಿಕಗಳ ಯಥೇಚ್ಚವಾಗಿ ಬಳಸಿದ ಪರಿಣಾಮ ಭೂಮಿ ಸತ್ವ ಕಳೆದುಕೊಂಡಿದೆ. ಹೆಚ್ಚಿನ ಇಳುವರಿ, ಲಾಭದ ದುರಾಸೆ ಮತ್ತು ವೈಭವದ ಜೀವನಕ್ಕೆ ಪ್ರಕೃತಿಯನ್ನು ನಾಶಪಡಿಸಲಾಗುತ್ತಿದೆ ರಾಸಾಯನಿಕ ರಹಿತ, ಸಾವಯವ ಗೊಬ್ಬರ ಬಳಸುವ ಮೂಲಕ ಸಹಜ ಕೃಷಿ ಮಾಡಲು ಯೋಜನೆಗಳನ್ನು ರೂಪಿಸಬೇಕು” ಎಂದು ತಿಳಿಸಿದರು.

ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಕೆ.ಎಲ್.ಶ್ರೀನಾಥ್, ಬೆಂಗಳೂರು ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್, ಆನೂರು ಕೃಷಿ ಪಂಡಿತ ಪ್ರಶಸ್ತಿ ವಿಜೇತ ವೀರಕೆಂಪಣ್ಣ, ಹಿತ್ತಲಹಳ್ಳಿಯ ಕೃಷಿ ಪ್ರಶಸ್ತಿ ಪುರಸ್ಕೃತ ಎಚ್.ಜಿ.ಗೋಪಾಲಗೌಡ, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ನಾರಾಯಣರೆಡ್ಡಿ, ಜಿಲ್ಲಾ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಜಯರಾಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜಿ, ಗೌರವ ಅಧ್ಯಕ್ಷ ರಂಗನರಸಿಂಹಯ್ಯ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version