Sidlaghatta : ಶಿಡ್ಲಘಟ್ಟ ಲೀಜನ್ ಕಳೆದ ಸಾಲಿನಲ್ಲಿ ಪ್ರಾರಂಭಗೊಂಡು ಉತ್ತಮವಾದ ಕಾರ್ಯಗಳನ್ನು ಮಾಡಿ ರಾಷ್ಟ್ರ ಅಧ್ಯಕ್ಷರ ವಿಶೇಷ ಮನ್ನಣೆಯನ್ನು ಪಡೆದಿದೆ ಹಾಗೂ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಸಹ ಲಭಿಸಿದೆ ಎಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಸೀನಿಯರ್ ಚಿತ್ರ ಕುಮಾರ್ ತಿಳಿಸಿದರು.
ನಗರದ ಕಾಳಿಕಾಂಬ ಕಮಠೇಶ್ವರ ದೇವಸ್ಥಾನದಲ್ಲಿ ಗುರುವಾರ ಪೂಜೆ ಸಲ್ಲಿಸಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಬೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ಶಿಡ್ಲಘಟ್ಟ ಸೀನಿಯರ್ ಚೇಂಬರ್ ಅನ್ನು ಪ್ರಾರಂಭಿಸುವ ಸಲುವಾಗಿ ಪೂರ್ವಭಾವಿ ಸಭೆ ಯನ್ನು ಇದೆ ಶಿಡ್ಲಘಟ್ಟ ನಗರದ ಶ್ರೀ ಕಾಳಿಕಾಂಬ ಕಮಟೇಶ್ವರ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಾಗ ಆಗ ನಾನು ರಾಷ್ಟ್ರೀಯ ನಿರ್ದೇಶಕ ಆಗಿದ್ದೆ. ಈ ವರ್ಷದ ನನ್ನ ಅಧಿಕಾರ ಅವಧಿಯ ಕಾರ್ಯಕ್ರಮಗಳನ್ನ ನಡೆಸಲು ಎಲ್ಲರೂ ಸಹಕರಿಸಬೇಕು ಎಂದರು.
ಸೀನಿಯರ್ ಚೇಂಬರ್ನ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಎಮ್ ಶಿವಕುಮಾರ್ ಮಾತನಾಡಿ, ಶಿಡ್ಲಘಟ್ಟ ಲೀಜನ್ ಕಳೆದ ಸಾಲಿನಂತೆ ಈ ವರ್ಷವೂ ಉತ್ತಮವಾದ ಕಾರ್ಯಗಳನ್ನು ಮಾಡಿ ಇತರ ಲೀಜನ್ ಗಳಿಗೆ ಮಾದರಿಯಾಗಲಿ. ರಾಷ್ಟ್ರೀಯ ಸಮ್ಮೇಳನದಲ್ಲಿ ನೀಡಿರುವ ಪ್ರಶಸ್ತಿಯನ್ನು ಶಿಡ್ಲಘಟ್ಟ ಅಧ್ಯಕ್ಷ ಎಮ್. ಕೆಂಪಣ್ಣನವರಿಗೆ ಪ್ರಧಾನ ಮಾಡುತ್ತಿದ್ದೇವೆ. ಈ ಸಾಲಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ರಾಷ್ಟ್ರದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಪಡೆಯಲಿ ಎಂದು ಹಾರೈಸಿದರು.
ರಾಷ್ಟ್ರೀಯ ಅಧ್ಯಕ್ಷರಿಗೂ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಲೀಜನ್ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಹರೀಶ್, ಸಂಘಟನಾ ಕಾರ್ಯದರ್ಶಿ ಅಮರನಾಥ್, ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೂಪಸಿ ರಮೇಶ್ ಹಾಜರಿದ್ದರು.