Tatahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಮತ್ತು ಶಾಲೆಗೆ ಕೊಡುಗೆಗಳ ಸಮರ್ಪಣೆ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಆವರಣದಲ್ಲಿ ಸಂಪಿಗೆ, ಪನ್ನೇರಳೆ, ಟರ್ಮಿನೆಲಿಯ ಮೆಂಟಲಿ, ಮದ್ರಾಸ್ ಅಶೋಕ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದೇವನಹಳ್ಳಿಯ ಪರಿಸರಪ್ರೇಮಿ ವಿ.ಶಶಿಧರ್ ಅವರು, ಮಕ್ಕಳಿಗೆ ಪರಿಸರದ ಮಹತ್ವವನ್ನು ವಿವರಿಸಿದರು. ಜನ್ಮದಿನಾಚರಣೆಯ ಸಂಭ್ರಮಗಳನ್ನು ಗಿಡನೆಡುವ ಮೂಲಕ ಆಚರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸಿಪಿ, ದೇವನಹಳ್ಳಿ ಕಚೇರಿಯ ಬಸವರಾಜ್ ಪಾಟೀಲ್ ರವರು ಶಾಲೆಗೆ ಮೂವತ್ತು ಸಾವಿರ ಮೌಲ್ಯದ ಯುಪಿಎಸ್ ಅನ್ನು ಕೊಡುಗೆಯಾಗಿ ನೀಡಿದರು. ಅವರು ಮಾತನಾಡುತ್ತಾ ಶಾಲೆಯ ವಿದ್ಯಾರ್ಥಿಗಳು ತಮಗೆ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾರ್ಥಿಗಳು ಹಾಗೂ ಒಳ್ಳೆಯ ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಗಾಯತ್ರಮ್ಮ, ಮುಖ್ಯ ಶಿಕ್ಷಕಿ ಎಚ್.ಎಂ. ಸರಸ್ವತಮ್ಮ, ಮೇಘನಾ, ಸಿದ್ದಾರ್ಥ್, ತೋಟಗಾರಿಕೆ ಇಲಾಖೆಯ ಗೋಪಾಲ್, ಎಸಿಪಿ, ದೇವನಹಳ್ಳಿ ಕಚೇರಿಯ ಶಾಲಿನಿ, ಶಿಡ್ಲಘಟ್ಟದ ಪ್ರಭಾ, ಶಾಲೆಯ ಸಹಶಿಕ್ಷಕರಾದ ಪಿ.ಸುದರ್ಶನ, ಎಸ್. ಕಲಾಧರ್, ಕೆ.ಎ. ನಾಗರಾಜ, ವಿ.ಶಾಂತಮ್ಮ ಹಾಜರಿದ್ದರು. ವಿದ್ಯಾರ್ಥಿಗಳಾದ ಪಾವನ ನಿರೂಪಣೆ, ಅನನ್ಯ ಸ್ವಾಗತ, ಸಂಜನಾ ಹಾಗೂ ತಂಡ ಪ್ರಾರ್ಥನೆ ಮತ್ತು ಸಂಧ್ಯಾ ವಂದನಾರ್ಪಣೆ ಮಾಡಿದರು.