Chikkaballapur : ವಿಧಾನ ಪರಿಷತ್ತಿನ (Vidhana Parishath) ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ (South East Teachers Constituency) ಸೋಮವಾರ ಮತದಾನ ನಡೆದಿದ್ದು ಜಿಲ್ಲೆಯಲ್ಲಿ ಶೇ.96.91 ರಷ್ಟು ಮತದಾನವಾಗಿದೆ. ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಗರಿಷ್ಠ ಶೇ 98.65 ಪ್ರಮಾಣದಲ್ಲಿ ಮತದಾನವಾಗಿದೆ.
ಗೌರಿಬಿದನೂರು ಮತಗಟ್ಟೆಯಲ್ಲಿ ಶೇ 97.41% ಬಾಗೇಪಲ್ಲಿ ಮತಗಟ್ಟೆಯಲ್ಲಿ 96.01% ಚೇಳೂರು ಮತಗಟ್ಟೆಯಲ್ಲಿ ಶೇ 98.25% ಗುಡಿಬಂಡೆ ಮತಗಟ್ಟೆಯಲ್ಲಿ ಶೇ 98.18% ಚಿಕ್ಕಬಳ್ಳಾಪುರ ಮತಗಟ್ಟೆಯಲ್ಲಿ ಶೇ 96.96% ಚಿಕ್ಕಬಳ್ಳಾಪುರ (ಎ) ಮತಗಟ್ಟೆಯಲ್ಲಿ ಶೇ 97.14% ಶಿಡ್ಲಘಟ್ಟ ಮತಗಟ್ಟೆಯಲ್ಲಿ ಶೇ 96.69% ಚಿಂತಾಮಣಿ ಮತಗಟ್ಟೆಯಲ್ಲಿ ಶೇ 98.09% ಚಿಂತಾಮಣಿ (ಎ) ಮತಗಟ್ಟೆಯಲ್ಲಿ ಶೇ 94.89% ಪ್ರಮಾಣದಲ್ಲಿ ಮತದಾನವಾಗಿದೆ.
ಮತಗಟ್ಟೆಗಳ ಬಳಿ ಬಿಜೆಪಿ ಮುಖಂಡರು ಮತ್ತು ಕಾಂಗ್ರೆಸ್ ಮುಖಂಡರು ಶಾಮಿಯಾನಗಳನ್ನು ಹಾಕಿ ಮತದಾರರಿಗೆ ತಮ್ಮ ಪರವಾಗಿ ಹಕ್ಕು ಚಲಾಯಿಸುವಂತೆ ಕೋರುತ್ತಿದ್ದರು.