Chikkaballapur: ಚಿಕ್ಕಬಳ್ಳಾಪುರದಿಂದ ಸುಮಾರು 24 ಕಿ.ಮೀ.ಗಳಷ್ಟು ದೂರದಲ್ಲಿರುವ ನಂದಿ ಬೆಟ್ಟದ ತುದಿಯಲ್ಲಿ ಟಿಪ್ಪು ಸುಲ್ತಾನ್ ವಸತಿಗೃಹವಿದೆ. ಸುಮಾರು 4850 ಅಡಿಗಳಷ್ಟು ಎತ್ತರದ ನಂದಿ ಬೆಟ್ಟದ ತುದಿಯಲ್ಲಿರುವ ಈ ವಸತಿಗೃಹವನ್ನು ಮೊದಲು ಕೋಟೆಯೆಂದೇ ಪರಿಗಣಿಸಲಾಗಿತ್ತು. ಚೋಳರ ಸಂಸ್ಥಾನ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ
ನಂದಿ ಬೆಟ್ಟ ‘ನಂದಿ ದುರ್ಗ’ವಾಗಿತ್ತು. ಚಿಕ್ಕಬಳ್ಳಾಪುರದ ಆಗಿನ ಪ್ರಧಾನ ಅಧಿಕಾರಿಗಳು ನಿರ್ಮಿಸಿದ್ದ ಈ ಕೋಟೆ ಮರಾಠಾ ಮಾಧವರಾವ್ ಅವರ ವಶದಲಿ?ಲತ್ತು.
1770ರಲ್ಲಿ ಯುದ್ಧ ಮಾಡಿದ ಹೈದರ್ ಅಲ್ಲಿ ಮತ್ತು ಟಿಪ್ಪು ಸುಲ್ತಾನ್ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1791ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಕಾರ್ನ್‌ವಾಲಿಸ್ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮುನ್ನ ಟಿಪ್ಪು ಕೋಟೆಯನ್ನು ವಿಶ್ರಾಂತಿಗೃಹವಾಗಿ ಬಳಸುತ್ತಿದ್ದರು. ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿತ ಈ ಕೋಟೆಯ ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಇಲ್ಲಿ ಬಂದಾಗಲೆಲ್ಲ ಟಿಪ್ಪು ವಾಸಿಸುತ್ತಿದ್ದರು ಎನ್ನುತ್ತವೆ ಇತಿಹಾಸದ ಪುಟಗಳು.