Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ವಿಶ್ವ ಔಷಧ ತಜ್ಞರ ದಿನಾಚರಣೆ (World Pharmacist Day) ಅಂಗವಾಗಿ ಶುಕ್ರವಾರ ಚಿಕ್ಕಬಳ್ಳಾಪುರದ ಕೆ.ವಿ.ಫಾರ್ಮಸಿ ಕಾಲೇಜಿನಿಂದ ಅಂಬೇಡ್ಕರ್ ಭವನದ ವರೆಗೂ ಜಾಥಾ ನಡೆಸಲಾಯಿತ್ತು.
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು “ವೈದ್ಯರ ಸಲಹಾ ಚೀಟಿ ಇಲ್ಲದಿದ್ದರೂ ಕೆಲವರು ಔಷಧಿಗಳನ್ನು ನೀಡುತ್ತಿರುವುದರಿಂದ ಸಮಾಜಕ್ಕೆ ತೊಂದರೆ ಆಗುತ್ತಿದ್ದು ಇದನ್ನು ನಿಯಂತ್ರಿಸಬೇಕು. Corona ಸಂದರ್ಭದಲ್ಲಿ ಔಷಧ ವ್ಯಾಪಾರಿಗಳು ಮನೆ ಮನೆಗೂ ಔಷಧಿಗಳನ್ನು ತಲುಪಿಸಿದ್ದಾರೆ. ಆದರೆ ನಮಗೆ ಯಾವುದೇ ಸೌಲಭ್ಯಗಳನ್ನು ಸರ್ಕಾರ ನೀಡಿಲ್ಲ” ಎಂದು ರಾಜ್ಯ ಔಷಧ ನಿಯಂತ್ರಕ ಬಿ.ಟಿ.ಖಾನಾಪುರೆ (Bhagoji T Khanapure) ರವರ ಗಮನಕ್ಕೆ ತಂದರು.
ಪ್ರಭಾರ ಔಷಧ ನಿಯಂತ್ರಕ ಡಾ.ಅಮರೀಶ್ ತುಂಬರ್ಗಿ, ಪರವಾನಗಿ ಮಂಡಳಿ ನಿಯಂತ್ರಕ ದೀಪಕ್ ಎನ್.ಗಾಯಕ್ವಾಡ್, ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಜಿ.ವಿ.ನಾರಾಯಣರೆಡ್ಡಿ, ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಅಶ್ವತ್ಥನಾರಾಯಣ್, ತಾಲ್ಲೂಕು ಅಧ್ಯಕ್ಷ ಸಿ.ಶಿವರಾಮಯ್ಯ, ಕಾರ್ಯದರ್ಶಿ ರಘು ಒಲೆಟಿ, ಉಪಾಧ್ಯಕ್ಷ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.