Chikkaballapur : ರಾಜ್ಯ ಪೊಲೀಸ್ ಇಲಾಖೆ ಮತ್ತು ಎಸ್‌ಬಿಐ ಸಹಯೋಗದಲ್ಲಿ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’, ‘ಎಲ್ಲರಿಗಾಗಿ ಫಿಟ್ ನೆಸ್’ ಮತ್ತು ‘ಮಾದಕ ದ್ರವ್ಯ ಮುಕ್ತ ಕರ್ನಾಟಕ’ ಧ್ಯೇಯವಾಕ್ಯದೊಂದಿಗೆ ಭಾನುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಮ್ಯಾರಥಾನ್ (Police Marathon) ನಡೆಯಿತು.
ಬೆಳಿಗ್ಗೆ 6.30ಕ್ಕೆ ನಗರದ ಜಿಲ್ಲಾ ಸರ್.ಎಂ.ವಿ ಕ್ರೀಡಾಂಗಣದಿಂದ ಆರಂಭವಾದ ಮ್ಯಾರಥಾನ್ ಅಲ್ಲಿಂದ ಶನಿಮಹಾತ್ಮ ದೇಗುಲದ ಆವರಣದ ಬಳಿ ಸಾಗಿ ತಿರುವು ಪಡೆಯಿತು. ಶಿಡ್ಲಘಟ್ಟ ರಸ್ತೆವರೆಗೆ ಮುಂದುವರಿದು ಅಲ್ಲಿಂದ ಡಿವೈಎಸ್‌ಪಿ ಕಚೇರಿ ಮುಂಭಾಗ ಹಾದು ಎಸ್‌ಪಿ ಕಚೇರಿ ಮನೆ ಮುಂಭಾಗದ ಮೂಲಕ ಮತ್ತೆ ಬಿಬಿ ರಸ್ತೆಗೆ ತಲುಪಿ ವಾಪಸ್ ಜಿಲ್ಲಾ ಕ್ರೀಡಾಂಗಣವನ್ನು ತಲುಪಿತು.
ಮ್ಯಾರಥಾನ್‌ನ ಸಾರ್ವಜನಿಕರ ವಿಭಾಗ, ಪೊಲೀಸ್ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಗಾಯಕ ಚಂದನ್ ಶೆಟ್ಟಿ, ನಟಿಯರಾದ ಸಂಜನಾ ನಾಯ್ಡು, ಅಚ್ಚುಗೌಡ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಖಾಸಿಂ, ಡಿವೈಎಸ್‌ಪಿ ಶಿವಕುಮಾರ್ ಉಪಸ್ಥಿತರಿದ್ದರು.