Wednesday, March 29, 2023
HomeChintamaniಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಶಿಬಿರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಶಿಬಿರ

- Advertisement -
- Advertisement -
- Advertisement -
- Advertisement -

Chintamani : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ವತಿಯಿಂದ ಚಿಂತಾಮಣಿ ನಗರದಲ್ಲಿ ಹಮ್ಮಿಕೊಂಡಿದ್ದ ತಿಮ್ಮಸಂದ್ರ ವಲಯದ ಸ್ವಸಹಾಯ ಸಂಘಗಳ ಒಕ್ಕೂಟದ ತರಬೇತಿ ಶಿಬಿರವನ್ನು (Training Camp) ಯೋಜನಾಧಿಕಾರಿ ಶಾರಿಕಾ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾರಿಕಾ “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘ ಹಾಗೂ ಪ್ರಗತಿಬಂಧು ತಂಡ ರಚಿಸಿ, ಸಂಘಟನೆಗೆ ಆದ್ಯತೆ ನೀಡಿ ಬಲವರ್ಧನೆಗೆ ಸ್ಥಳಿಯ ಒಕ್ಕೂಟವನ್ನು ರಚಿಸಲಾಗುತ್ತದೆ. ಈ ಸಂಘಗಳ ಕಾರ್ಯಕ್ರಮ ಪ್ರಜಾಪ್ರಭುತ್ವ ಮಾದರಿ ಯಲ್ಲಿ ಸದಸ್ಯರಿಂದ, ಸದಸ್ಯರಿಗಾಗಿ, ಸದಸ್ಯರೇ ನಡೆಸಿಕೊಂಡು ಹೋಗುವ ಸಂಘಟನೆಯಾಗಿದ್ದು 2 ವರ್ಷ ಅವಧಿಯ ಕುಟುಂಬಗಳ ಅಭಿವೃದ್ಧಿ ಒಕ್ಕೂಟದಲ್ಲಿ ಅಧ್ಯಕ್ಷರು ಸೇರಿ 5 ಮಂದಿ ಪದಾಧಿಕಾರಿಗಳು ಕಾರ್ಯನಿರ್ವಹಿಸಿರುತ್ತಾರೆ. ಒಂದು ಒಕ್ಕೂಟದ ವ್ಯಾಪ್ತಿಯಲ್ಲಿ 25 ರಿಂದ 30 ಸಂಘಗಳು ಇದ್ದು 5ರಿಂದ 6 ಸಂಘಗಳ ಜವಾಬ್ದಾರಿಯನ್ನು ಒಬ್ಬ ಪದಾಧಿಕಾರಿಗೆ ನೀಡಲಾಗುತ್ತದೆ. ಬಡ ಮತ್ತು ಮಾಧ್ಯಮ ವರ್ಗದ ಕುಟುಂಬದವರು ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆ ಸಹಕಾರಿ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!