Home News Chikkaballapur ನಾನು ಬಡವರಿಗೆ ಶಾಸಕ : ಪ್ರದೀಪ್ ಈಶ್ವರ್

ನಾನು ಬಡವರಿಗೆ ಶಾಸಕ : ಪ್ರದೀಪ್ ಈಶ್ವರ್

0
Chikkaballapur Pradeep Eshwar Constitution Awareness Jatha

Chikkaballapur : ಮಂಗಳವಾರ ಚಿಕ್ಕಬಳ್ಳಾಪುರ ನಗರದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ (Constitution Awareness Jatha) ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) “ಪರಿಶಿಷ್ಟ ಸಮುದಾಯದ ವಿವಾಹಗಳಿಗೆ ನಗರದ ಅಂಬೇಡ್ಕರ್ ಭವನವನ್ನು ಉಚಿತವಾಗಿ ನೀಡಲಾಗುವುದು. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಕೈಗೊಳ್ಳಲಾಗಿದೆ. ಎಂ.ಜಿ ರಸ್ತೆ ವಿಸ್ತರಣೆಯಾದ ನಂತರ ಅಂಬೇಡ್ಕರ್ ವೃತ್ತದ ನಡುವೆ ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ಎಸ್‌ಡಿಎ, ಎಫ್‌ಡಿಎ, ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವೆ. ನನ್ನ ತಾಯಿ ಹೆಸರಿನಲ್ಲಿ ಆಂಬುಲೆನ್ಸ್ ನೀಡಿದ್ದೇನೆ. ಇದರಿಂದ ಬಡವರಿಗೆ ಅನುಕೂಲವಾಗುತ್ತಿದೆ. ನಾನು ಬಡವರಿಗೆ, ಪರಿಶಿಷ್ಟರಿಗೆ ಶಾಸಕ. ಅವರಿಗೆ ಬೇಕು. ಶ್ರೀಮಂತರ ಮನೆಗೆ ಬೇಕಾಗಿಲ್ಲ” ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ, ಸು.ಧಾ ವೆಂಕಟೇಶ್, ವೆಂಕಟರ್, ರಾಜಾಕಾಂತ್, ಮಂಜುನಾಥ್, ಗೌತಮ್ ಗಂಗಾಧರ್, ರತ್ನಮ್ಮ ಮತ್ತಿತರರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version