Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು (Post metric student hostels sports meet) ಚಿಕ್ಕಬಳ್ಳಾಪುರ ನಗರದ ಕೆ.ವಿ.ವೆಂಕಟಪ್ಪ ಬಿಇಡಿ ಕಾಲೇಜು ಮೈದಾನದಲ್ಲಿ ಶನಿವಾರ ನಡೆಸಲಾಯಿತು. ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್, ಹಗ್ಗ ಜಗ್ಗಾಟ ಇನ್ನಿತರ ಆಟಗಳು ನಡೆದವು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಮುನಿರತ್ನಮ್ಮಕ್ರೀಡಾಕೂಟಕ್ಕೆ ಚಾಲನೆ ನೀಡಿ “ಓದು, ಬರಹದ ಜೊತೆಗೆ ಕ್ರೀಡೆಗಳು ಮುಖ್ಯವಾಗಿದ್ದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಕ್ರೀಡೆ ಕಾಪಾಡುತ್ತದೆ. ಪ್ರತಿದಿನ ನಿರಂತರವಾಗಿ ವ್ಯಾಯಾಮ ಮಾಡಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುದ್ದೇನಹಳ್ಳಿಯ ವಿಟಿಯು ಕ್ಯಾಂಪಸ್‌ನ ಪ್ರಾಧ್ಯಾಪಕ ಪ್ರಸನ್ನ, ಕೆ.ವಿ ಬಿಇಡಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್, ಬಿಜಿಎಸ್ ಬಿಪಿಇಡ್ ಕಾಲೇಜಿನ ಪ್ರಾಂಶುಪಾಲ ಶಿವಶಂಕರ್, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಕುಸುಮಾ ಭಟ್, ನಿಲಯಪಾಲಕ ಡಿ.ವೈ ಮಂಜುನಾಥ್, ವರಲಕ್ಷ್ಮಿ, ನಿಲಯ ಮೇಲ್ವಿಚಾರಕ ವೇಣು, ಶುಭಾ ಮತ್ತು ಅಡುಗೆ ಸಿಬ್ಬಂದಿ ಪಾಲ್ಗೊಂಡಿದ್ದರು.