Gudibande : ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ (District Incharge secretary) ಮಂಜುಳ ಅವರು ಗುರುವಾರ ಗುಡಿಬಂಡೆ ತಾಲೂಕ್ಕಿನ ವರ್ಲಕೊಂಡ ಗ್ರಾಮದ ಅಂಗನವಾಡಿ, ಗ್ರಂಥಾಲಯಗಳಿಗೆ (Anganwadi) (library) ಭೇಟಿ (Visit) ನೀಡಿ ಪರಿಶೀಲಿಸಿದರು.
ಈ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುಳ “ಪ್ರವಾಸದ ನಿಮಿತ್ತ ಭೇಟಿ ನೀಡಿದ್ದು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಎಲ್ಲ ಸವಲತ್ತುಗಳನ್ನು ನೀಡಲಾಗುತ್ತಿದೆ. ಇನ್ನೂ ಗ್ರಂಥಾಲಯದಲ್ಲಿ ಹೆಚ್ಚಿನ ಸೌಲಭ್ಯಗಳು ಬೇಕಾಗಿದ್ದು ಈ ವಿಚಾರ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು” ಎಂದು ತಿಳಿಸಿದರು.
ಕೆರೆಗಳಲ್ಲಿ ಮಣ್ನು ತೆಗೆದು ಲೇಔಟ್ ನಿರ್ಮಾಣವಾಗುತ್ತಿದ್ದು ಕೆರೆಯಲ್ಲಿ ಅಕ್ರಮವಾಗಿ 20 ಅಡಿ ಆಳಕ್ಕೆ ಮಣ್ಣು ತೆಗೆಯುತ್ತಿದ್ದು ಇದರಿಂದ ಕೆರೆಕಟ್ಟೆ ಒಡೆಯಬಹುದು ಎಂದು ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಮನಕ್ಕೆ ತಂದರು. ಈ ವಿಚಾರ ಜಿಲ್ಲಾಧಿಕಾರಿ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಅಕ್ರಮವಾಗಿ ಕೆರೆಯಲ್ಲಿ ಮಣ್ಣು ತೆಗೆಯುವವರ ಮೇಲೆ ಕ್ರಮಕೈಗೊಳ್ಳಲು ಸೂಚನೆ ನೀಡುವುದಾಗಿ ಮಂಜುಳ ಭರವಸೆ ನೀಡಿದರು.