KGF : ಕೆಜಿಎಫ್ ನ ಕ್ಯಾಸಂಬಳ್ಳಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬುಧವಾರ ರಾಬರ್ಟಸನ್ಪೇಟೆ ಪೊಲೀಸರು ದಾಳಿ ಮಾಡಿ ನೆರೆ ರಾಜ್ಯದಿಂದ ಗಾಂಜಾವನ್ನು ತಂದು ಗಡಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಆಂಧ್ರಪ್ರದೇಶದ ಮೂವರನ್ನು ಬಂಧಿಸಿ, ಅವರಿಂದ ಸುಮಾರು 5 ಲಕ್ಷ ಮೌಲ್ಯದ ಒಣ ಗಾಂಜಾವನ್ನು (Ganja Raid) ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕುಪ್ಪಂ ತಾಲ್ಲೂಕಿನ ಅನಿಗಾನೂರು ನಿವಾಸಿ ವೆಂಕಟಾಚಲಪತಿ, ವಿಜಿಲಾಪುರ ಗ್ರಾಮದ ಹಂಸಗಿರಿ ಮತ್ತು ಕೆಂಚನಬಲ್ಲ ಗ್ರಾಮದ ನಿಖಿಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳಿಂದ 6 ಕೆಜಿ 340 ಗ್ರಾಂ ಒಣ ಗಾಂಜಾವನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ರಾಬರ್ಟಸನ್ಪೇಟೆ ಸಬ್ ಇನ್ಸ್ಪೆಕ್ಟರ್ ಯತೀಶ್, ಸಿಬ್ಬಂದಿಗಳಾದ ಗೋಪಿನಾಥ್, ಮಂಜುನಾಥ ರೆಡ್ಡಿ, ಬಸವರಾಜ ಕಾಂಬ್ಳೆ, ರಘು, ಮುರಳಿ ಮತ್ತು ಚಾಲಕ ಮನೋಹರ್ ಅವರು ಪಾಲ್ಗೊಂಡಿದ್ದರು.