Home News Chikkaballapur ಲೋಕಸಭಾ ಚುನಾವಣೆ ಮತ ಎಣಿಕೆ : ಜಿಲ್ಲಾಧಿಕಾರಿಗಳ ಸುದ್ಧಿಗೋಷ್ಠಿ

ಲೋಕಸಭಾ ಚುನಾವಣೆ ಮತ ಎಣಿಕೆ : ಜಿಲ್ಲಾಧಿಕಾರಿಗಳ ಸುದ್ಧಿಗೋಷ್ಠಿ

0
Chikkaballapur Lokasabha Election Vote Counting

Chikkaballapur : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ (Lokasabha Election) ಮತ ಎಣಿಕೆ (Vote Counting) ಪ್ರಕ್ರಿಯೆಯು ದೇವನಹಳ್ಳಿ ರಸ್ತೆಯ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್‌ 4 ರಂದು ನಡೆಯಲಿದ್ದು ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಯನ್ನು ಸಾಮಾನ್ಯ ಹಾಗೂ ಎಣಿಕೆ ವೀಕ್ಷಕರು, ಅಭ್ಯರ್ಥಿಗಳು, ಚುನಾವಣಾ ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗುವುದು.

ಕಾಲೇಜು ಕಟ್ಟಡದ ನೆಲ ಮಹಡಿಯ ಕೊಠಡಿ ಸಂಖ್ಯೆ 2 ರಲ್ಲಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರ, ಕೊಠಡಿ ಸಂಖ್ಯೆ 4ರಲ್ಲಿ ಅಂಚೆ ಮತ ಪತ್ರಗಳು, 1ನೇ ಮಹಡಿಯ 104ನೇ ಸಂಖ್ಯೆಯ ಕೊಠಡಿಯಲ್ಲಿ ಗೌರಿಬಿದನೂರು, 105ನೇ ಸಂಖ್ಯೆಯ ಕೊಠಡಿಯಲ್ಲಿ ಚಿಕ್ಕಬಳ್ಳಾಪುರ, 2ನೇ ಮಹಡಿಯ 201ನೇ ಸಂಖ್ಯೆಯ ಕೊಠಡಿಯಲ್ಲಿ ಹೊಸಕೋಟೆ, 204 ಹಾಗೂ 205ನೇ ಸಂಖ್ಯೆಯ ಕೊಠಡಿಗಳಲ್ಲಿ ಯಲಹಂಕ, 3ನೇ ಮಹಡಿಯ 301ನೇ ಸಂಖ್ಯೆಯ ಕೊಠಡಿಯಲ್ಲಿ ನೆಲಮಂಗಲ, 304ನೇ ಸಂಖ್ಯೆಯ ಕೊಠಡಿಯಲ್ಲಿ ದೇವನಹಳ್ಳಿ, 305ನೇ ಸಂಖ್ಯೆಯ ಕೊಠಡಿಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾಹಿತಿ ನೀಡಿದರು.

ಲೋಕಸಭಾ ಕ್ಷೇತ್ರದ ಸಾಮಾನ್ಯ ಚುನಾವಣಾ ವೀಕ್ಷಕ ನ್ಯಾಲಿ ಈಟೆ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ, ಚುನಾವಣಾ ಸಂಬಂಧ ನಿಯೋಜಿತ ಅಧಿಕಾರಿಗಳು ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version