Chintamani : ಚಿಂತಾಮಣಿ ತಾಲ್ಲೂಕಿನ ಮುರುಗಮಲೆಯ (Murugamalla Dargah) ಹಜರತ್ ಅಮ್ಮಾಜಾನ್ ಮತ್ತು ಬಾವಾಜಾನ್ ದರ್ಗಾದಲ್ಲಿ (Hazrat AmmaJaan BawaJaan Dargah) ಉರುಸ್ (Urus) ಅಂಗವಾಗಿ ಗುರುವಾರ ರಾತ್ರಿ ಶ್ರದ್ಧಾ ಭಕ್ತಿ ಅದ್ದೂರಿ ಗಂಧೋತ್ಸವದ (Gandhotsava) ಮೆರವಣಿಗೆ ನಡೆಯಿತು. ಉರುಸ್ ಮೊದಲ ದಿನ ವಿವಿಧ ಮುಜಾವರ್‌ಗಳ ಮನೆಯಿಂದ ಗಂಧವನ್ನು ತಂದು ಅಮ್ಮಾಜಾನ್, ಬಾವಾಜಾನ್ ಗೆ ಸಮರ್ಪಿಸುವುದು ಪದ್ಧತಿಯಾಗಿದೆ.
ಪ್ರತಿವರ್ಷದಂತೆ ಪಟೇಲ್ ಬಾಷು, ಹಾಜಿ ಅನ್ಸರ್ ಖಾನ್, ಫೈಯಾಜ್, ಜಂಗ್ಲಿಪೀರ್ ಬಾಬಾ ದರ್ಗಾ ಮುತವಲ್ಲಿ ಬಾಬಾ ಜಾನ್, ಲೇಟ್ ಅನ್ವರ್ ಸಾಬ್, ನೂರ್ ಜಾನ್ ಅವರ ಮನೆಗಳಿಂದ ದರ್ಗಾದ ಮೌಲ್ವಿಗಳು ಗಂಧೋತ್ಸವವನ್ನು ತೆಗೆದುಕೊಂಡು ಸಂಪ್ರದಾಯದಂತೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರಣಿಗೆಯ ಮೂಲಕ ದರ್ಗಾಗೆ ತರಲಾಯಿತು.
ಗಂಧೋತ್ಸವದಲ್ಲಿ ವಕ್ಫ್ ಬೋರ್ಡ್ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಪಾಲ್ಗೊಂಡಿದ್ದರು.