Home News Chikkaballapur ವಾಪಸಂದ್ರದಲ್ಲಿ ನಮಸ್ತೆ ಚಿಕ್ಕಬಳ್ಳಾಪುರ

ವಾಪಸಂದ್ರದಲ್ಲಿ ನಮಸ್ತೆ ಚಿಕ್ಕಬಳ್ಳಾಪುರ

0

Chikkaballapur : ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸೋಮವಾರ ‘ನಮಸ್ತೆ ಚಿಕ್ಕಬಳ್ಳಾಪುರ’ದ (Namaste Chikkaballapur) ಭಾಗವಾಗಿ ಚಿಕ್ಕಬಳ್ಳಾಪುರ ನಗರದ 24ನೇ ವಾರ್ಡ್‌ನ ವಾಪಸಂದ್ರದ ವಿವಿಧ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ನಾಗರಿಕರು ಚರಂಡಿ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದು, ರಸ್ತೆಯಲ್ಲಿ ವಿದ್ಯುತ್ ಕಂಬಗಳು ಇವೆ ಎಂದು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾಗ “24ನೇ ವಾರ್ಡ್‌ಗೆ ₹ 14 ಕೋಟಿ ಅನುದಾನ ತಂದಿದ್ದೇವೆ. ಈ ಭಾಗದ ನಮ್ಮ ಪಕ್ಷದ ಮುಖಂಡರು ನಮ್ಮ ಜೊತೆಯಲ್ಲಿ ಇದ್ದು ಓಡಾಟ ನಡೆಸಿದ್ದಾರೆ. ವಾರ್ಡ್ ಅಭಿವೃದ್ಧಿಗೊಳಿಸಲಾಗುವುದು” ಎಂದು ಶಾಸಕರು ತಿಳಿಸಿದರು.

ನಂತರ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೂರು, ಮೈಲಪ್ಪನಹಳ್ಳಿ, ಬಚ್ಚಹಳ್ಳಿ, ಗಂಟಿಗಾನಹಳ್ಳಿ ಮತ್ತು ಬಂಡಹಳ್ಳಿಗೆ ಶಾಸಕರು ಭೇಟಿ ನೀಡಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version