Sidlaghatta : ಶಿಡ್ಲಘಟ್ಟ ನಗರದ ಟಿ.ಬಿ.ರಸ್ತೆಯಲ್ಲಿ ಭಾನುವಾರ ಶಿಡ್ಲಘಟ್ಟ BJP ನಗರ ಮಂಡಲ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ರವರ 125 ಜನ್ಮದಿನಾಚರಣೆಯನ್ನು ಆಚರಿಸಿ ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಮುಖೇಶ್ ಮಾತನಾಡಿದರು.
ನೇತಾಜಿ ಅವರ ಜೀವನ, ಅವರ ಕಾರ್ಯ, ಅವರ ಪ್ರತಿ ನಿರ್ಧಾರ ಎಲ್ಲರಿಗೂ ಪ್ರೇರಣೆ. ಅವರ ತ್ಯಾಗವನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಲುವಾಗಿ ಸರ್ಕಾರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ ಎಂದು ಅವರು ತಿಳಿಸಿದರು.
ಇಂದು ಇಡೀ ಭಾರತ ದೇಶಕ್ಕೆ ಹೆಮ್ಮೆಯ ದಿನ. ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ದ ಸೈನ್ಯ ಕಟ್ಟಿದ ಅಪ್ರತಿಮ ನಾಯಕ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟನೆ ಮಾಡುವಲ್ಲಿ ಅವರ ಪಾತ್ರ ದೊಡ್ಡದು. ಆಜಾದ್ ಹಿಂದ್ ಫೌಜ್‌ನಲ್ಲಿ 60 ಸಾವಿರ ಯುವಕರನ್ನು ತೊಡಗಿಸಿಕೊಂಡರು. ಸ್ವಾತಂತ್ರ್ಯಕ್ಕೆ ಭದ್ರ ಬುನಾದಿ ಹಾಕಿದರು. ವೀರಪರಾಕ್ರಮಿಯಾದ ಸುಭಾಷ್ ಚಂದ್ರ ಬೋಸ್ ಅವರು ನಮಗೆ ಪ್ರೇರಣಾಶಕ್ತಿ ಎಂದು ಹೇಳಿದರು.
BJP ನಗರ ಮಂಡಲ ಉಪಾಧ್ಯಕ್ಷ ಮಧುಸೂದನ್, ಮಂಜುಳಮ್ಮ, ಮಂಜು ಕಿರಣ್, ದೇವರಾಜ್, ಪ್ರಕಾಶ್, ರಘುನಾಥ್, ಭಾಸ್ಕರ್, ಮೋಹನ್, ಶ್ರೀರಾಮ್, ಬಿ.ಸಿ .ಲೋಕೇಶ್, ಸಿ .ಮಂಜು, ತ್ರಿವೇಣಿ, ಮೊಹಮ್ಮದ್ ಅಮಾನುಲ್ಲಾ, ಕದಿರ್, ನವೀನ್, ಸುನಿಲ್, ನರಸಿಂಹಮೂರ್ತಿ ಹಾಜರಿದ್ದರು.