Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ (Muddenahalli), ಸತ್ಯಸಾಯಿ ಗ್ರಾಮದಲ್ಲಿ (Satya Sai Grama) ಭಾನುವಾರ ನಾಡಹಬ್ಬ ದಸರಾ (Dasara)ಮಹೋತ್ಸವ, ನವರಾತ್ರಿ ಹೋಮ, ದುರ್ಗಾ ಪೂಜೆ ಕಾರ್ಯಕ್ರಮಗಳು ಆರಂಭಗೊಂಡಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ “ಎಲ್ಲಿ ಸದಾಚಾರ ಸಂಪನ್ನ ಸತ್ಕಾರ್ಯಗಳು ನಡೆಯುತ್ತದೆಯೋ ಅಲ್ಲಿ ಮಹಾ ಕಾರ್ಯಗಳು ಕೂಡ ಶತಸಿದ್ಧ. ಭಗವಂತನ ಸಂಕಲ್ಪ ಬಲವಾಗಿದ್ದಾಗ ಅದರ ಮುಂದೆ ಯಾವ ಅಡೆತಡೆಗಳು ಕೆಲಸ ಮಾಡಲು ಸಾಧ್ಯವಿಲ್ಲ. ನವರಾತ್ರಿ ದಸರಾ ಮಹೋತ್ಸವದ ಈ ಸಂದರ್ಭದಲ್ಲಿ ದುರ್ಗಾ ಮಾತೆಯ ಆರಾಧನೆ, ಯಜ್ಞಗಳು ಸತ್ಯಸಾಯಿ ಗ್ರಾಮದಲ್ಲಿ ಲೋಕ ಕಲ್ಯಾಣದ ದೃಷ್ಟಿಯಿಂದ, ಜನರ ಯೋಗಕ್ಷೇಮದ ಉದ್ದೇಶದಿಂದ ನೆರವೇರುತ್ತಿದೆ. ಇಂತಹ ಮಹಾನ್ ಕಾರ್ಯಗಳು ಮಧುಸೂದನ ಸಾಯಿ ಅವರ ಸನ್ನಿಧಾನದಲ್ಲಿ ನಿರಂತರ ನಡೆಯುತ್ತಿರುವುದು ನನ್ನ ಅನುಭವಕ್ಕೆ ಸಿಕ್ಕಿದೆ” ಎಂದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸತ್ಯಸಾಯಿ ಪ್ರೇಮಾಮೃತಮ್ ಸಭಾ ಭವನದಲ್ಲಿ ಜರುಗಿದವು. ಕಾರ್ಯಕ್ರಮದಲ್ಲಿ ಸದ್ಗುರು ಮಧುಸೂಧನ ಸಾಯಿ, ದೇಶ, ವಿದೇಶಗಳ ಗಣ್ಯರು, ಆಶ್ರಮದ ಪದಾಧಿಕಾರಿಗ ಪಾಲ್ಗೊಂಡಿದ್ದರು.