Gudibande : ಗುಡಿಬಂಡೆ ಪಟ್ಟಣದ ಅಂಬೇಡ್ಕರ್, ವಾಲ್ಮೀಕಿ ನಗರ, ಚಿನ್ನಹಳ್ಳಿ ಗ್ರಾಮದ ನೂರಾರು ರೈತರು ಗುಡಿಬಂಡೆ ತಾಲ್ಲೂಕು ಕಚೇರಿ ಎದುರು ಸೋಮವಾರ ತಾಲ್ಲೂಕಿನ ಚದುಮನಹಳ್ಳಿ ಸರ್ವೆ ನಂಬರ್ 27ರಲ್ಲಿ ಕಂದಾಯ ಇಲಾಖೆಯಿಂದ ನಮ್ಮ ಪೂರ್ವಿಕರಿಗೆ ಮಂಜೂರಾಗಿದ್ದ ಜಮೀನನ್ನು ಈಗ ಅರಣ್ಯ ಇಲಾಖೆ ಸರ್ವೆ (Forest Department Survey) ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು (Farmers Protest).
ಈ ಸಂಧರ್ಭದಲ್ಲಿ ರೈತ ಮೂರ್ತಿ ಮಾತನಾಡಿ “ಸುಮಾರು 80 ಜನರಿಗೆ ಸರ್ವೆ ನಂಬರ್ 27ರಲ್ಲಿ ಜಮೀನು ಮಂಜೂರಾಗಿಡಿದ್ದು ಈಗ ಏಕಾಏಕಿ ಅರಣ್ಯ ಇಲಾಖೆ ಸರ್ವೆ ಮಾಡುತ್ತಿದೆ. ಇದು ಅಂತಕಕ್ಕೆ ಕಾರಣವಾಗಿದೆ. ಪಹಣಿಯಂತೆ ಕಂದಾಯ ಇಲಾಖೆ ಸರ್ವೆ ಮಾಡಿ ನಮ್ಮ ಕೃಷಿ ಜಮೀನು ಗುರುತಿಸಬೇಕು. ಈ ಕಾರಣದಿಂದ ಎಂದು ಪ್ರತಿಭಟನೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ತಹಶೀಲ್ದಾರ್ ಮನಿಷಾ ರೈತರಿಂದ ಮನವಿ ಸ್ವೀಕರಿಸಿ, ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮಂಗಳವಾರ ಎರಡು ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವರು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.